ತುಮುಲ – Kannada Poem by Dr. Naveen Kodlady

ಪ್ರಶ್ನೆಯೋ ಉತ್ತರವೋ ಪ್ರಶ್ನೆಗಳಿಗೆ ಉತ್ತರವೋ
ಉತ್ತರವದೆ ಪ್ರಶ್ನೆಯೋ ಪ್ರಶ್ನೆಯೇ ಉತ್ತರವೋ ?

ಹಲವು ವರ್ಷ ಕಾಲ ಅಲೆದು ದುಡಿಮೆಗೆಂದು ಓಡಿ ಬರಲು
ಕೆಲವು ಜನರ ಪ್ರಶ್ನೆಗಳಿಗೆ ಉತ್ತರವನು ನೀಡಿದಾಗ
ವೃತ್ತಿಯೋ ಆವೃತ್ತಿಯೋ ಆಸೆಯ ನಿವೃತ್ತಿಯೋ?

ಬಡರಿಗೆಂದು ಸರಕಾರದಿ ನೆರವು ನೀತಿ ನಿಯಮ ರಚಿಸಿ
ಪಡೆಯಲೆಂದು ನಡೆದವರಿಗೆ ಎಡವು ಮಾಡಿ ಕೊಡದೆ ಇರಲು
ಬಡತನದ ನಾಶವೋ ಬಡರಿಗದೇ ಪಾಶವೋ?

ಅಮ್ಮ ಬೆಕ್ಕು ಮಗಳು ಬೇಕು ಅತ್ತೆ ಶ್ವಾನ ಸೊಸೆಯ ಬಿಸುಟೆ
ಮಹಿಳೆ ಸಬಲವಾಗಬೇಕು ಎಂಬ ಕೂಗು ಮೊಳಗುತಿರಲು
ಸಬಲವೋ ಅಬಲವೋ ಬಲವೆ ಇರದ ರೋಧವೋ?

ಭಾವನೆಗಳ ಸಾಗರದಲಿ ತೇಲಿ ಮುಳುಗಿ ಮುಳುಗಿ ತೇಲಿ
ಆಳದಿಂದ ಹೊನ್ನು ಎಂದು ತಂದು ಜನಕೆ ನೀಡೆ ಕವಿಯು
ಒಪ್ಪುಗೆಯೋ ಅಪ್ಪುಗೆಯೋ ತೆಪ್ಪೆಗೆಸೆವ ಸಿಪ್ಪೆಯೋ?

ಕರ್ಮ ಕಾಂಡದಲ್ಲಿ ನಿಜದಿ ಇರದೆ ಇರದು ತುಮುಲವು
ಪರಿಣಾಮವು ಪರದೆಯಾಚೆ ಪರದೆ ಜನಕೆ ಸ್ಪೂರ್ತಿಯು
ಫಲದ ಲೆಕ್ಕ ಬಿಟ್ಟು ನೀನು ಕೆಲಸ ಮಾತ್ರ ಮಾಡೆಲೊ.

ಕೇನ
(
ಡಾ.ನವೀನ ಕೊಡ್ಲಾಡಿ)

Advertisements

13 Comments

Filed under Kannada

13 responses to “ತುಮುಲ – Kannada Poem by Dr. Naveen Kodlady

 1. Happy to see my thoughts on your blog! Thank You

 2. The prize winning poem 7 yrs back in our college….
  which everyone remembers even today.
  its really nice to read it today…thanx for posting.

 3. Dr Revati

  adbhutavada kavite, kannadakke ennu hecchina koduge nimmindagali,

 4. Pallavi

  I know he is not only a good poet but the rare human with values….I am proud he is my friend.This poetry must have come from his silence……being in divine.

 5. Rajesh Hegde

  Nice.. Keep it up n i wish u good luck

 6. Dr.Dayananada.R.D

  very good so bombay has inspired u

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s